APOPHTHEGMS AND INTERLUDES - ಜ್ನಾನೋಕ್ತಿಗಳು ಮತ್ತು ಮದ್ಯಂತರ ಬರಹಗಳು
63. ಒಬ್ಬ ನಿಜವಾದ ಗುರು- ತನ್ನ ಶಿಷ್ಯರ ಹಿತಾಸಕ್ತಿಯಲ್ಲಿ ಮಾತ್ರ- ತಮ್ಮನ್ನು ಹಾಗೂ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. 64. ಕೇವಲ ತಿಳುವಳಿಕೆಗಾಗಿ ಪಡೆದುಕೊಳ್ಳುವ ಜ್ಞಾನ- ನೈತಿಕ ಮೌಲ್ಯಗಳ ಒಂದು ಜಾಲವಾಗಿದೆ. ಜ್ಞಾನದ ಮೇಲಿನ ನಂಬಿಕೆ ನಮ್ಮನ್ನು ಆ ಜಾಲದ ಒಳಗೆ ಸೆಳೆಯುತ್ತದೆ. 65. ಸಾಕಷ್ಟು ಅವಮಾನ ಅನುಭವಿಸದೇ ಪಡೆದ ಜ್ಞಾನ- ಅಷ್ಟು ಮಹತ್ವದ್ದಾಗಿರುವುದಿಲ್ಲ. 66. ತಪ್ಪು ಮಾಡುವ ಅವಕಾಶ ನೀಡದೆ- ನಾವು ನಮ್ಮ ದೇವರಿಗೆ ಅಗೌರವ ತೋರಿಸುತ್ತಿದ್ದೇವೆ. 67. ಒಬ್ಬರನ್ನೇ ಪ್ರೀತಿಸುವುದು ಕ್ರೌರ್ಯ. ಏಕೆಂದರೆ, ಅದು ಬೇರೆಯವರ ಪ್ರೀತಿ ಕಡೆಗಣಿಸಿದಂತೆ. - ಇದು ದೇವರ ಮೇಲಿನ ಪ್ರೀತಿಗೂ ಸಹ ಅನ್ವಯಿಸುತ್ತದೆ. 68. “ನಾನು ಇದನ್ನು ಮಾಡಿದೆ” ಎಂದು ನೆನಪು ಹೇಳಿದರೆ, “ನಾನು ಇದನ್ನು ಮಾಡಬಾರದಿತ್ತು” ಎಂದು ಗೌರವ ಹೇಳುತ್ತದೆ. ಗೌರವ ಸೋಲೊಪ್ಪಿಕೊಳ್ಳದಿರುವ ಕಾರಣ ಕೊನೆಗೆ ನೆನಪು ಸೋಲೊಪ್ಪಿಕೊಳ್ಳುತ್ತದೆ. 69. ಸೌಮ್ಯ ಸ್ವಭಾವ - ಕೆಲವೊಮ್ಮೆ ಜೀವನವನ್ನು ಸರ್ವನಾಶ ಮಾಡುತ್ತದೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವಾದರೆ, ನೀವು ಜೀವನವನ್ನು ಸೂಕ್ಷ್ಮವಾಗಿ ಗಮನಿಸಿಲ್ಲ ಎಂದರ್ಥ. 70. ಒಬ್ಬನಿಗೆ ವ್ಯಕ್ತಿತ್ವವಿದೆ ಎಂದಲ್ಲಿ, ಅವನ ಜೀವನದ ಘಟನೆಗಳು ಪುನರಾವರ್ತಿಸುತ್ತವೆ. 71. ನೀವಿನ್ನೂ ನಕ್ಷತ್ರಗಳನ್ನು ಮೇಲೆ ಕಾಣುತ್ತಿರುವಂತೆಯೇ ನೋಡುತ್ತಿರುವಿರಾದರೆ, ನಿಮ್ಮಗಿನ್ನೂ ಜ್ಞಾನಿಯ ನೋಟ ಬಂದಿಲ್ಲ ಎಂದರ್ಥ. 72. ಮಹಾತ್ಮರಾಗುವುದು ಶಕ್...