APOPHTHEGMS AND INTERLUDES - ಜ್ನಾನೋಕ್ತಿಗಳು ಮತ್ತು ಮದ್ಯಂತರ ಬರಹಗಳು

63. ಒಬ್ಬ ನಿಜವಾದ ಗುರು- ತನ್ನ ಶಿಷ್ಯರ ಹಿತಾಸಕ್ತಿಯಲ್ಲಿ ಮಾತ್ರ- ತಮ್ಮನ್ನು ಹಾಗೂ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

64. ಕೇವಲ ತಿಳುವಳಿಕೆಗಾಗಿ ಪಡೆದುಕೊಳ್ಳುವ ಜ್ಞಾನ- ನೈತಿಕ ಮೌಲ್ಯಗಳ  ಒಂದು ಜಾಲವಾಗಿದೆ. ಜ್ಞಾನದ ಮೇಲಿನ ನಂಬಿಕೆ ನಮ್ಮನ್ನು ಆ ಜಾಲದ ಒಳಗೆ ಸೆಳೆಯುತ್ತದೆ.

65. ಸಾಕಷ್ಟು ಅವಮಾನ ಅನುಭವಿಸದೇ ಪಡೆದ ಜ್ಞಾನ- ಅಷ್ಟು ಮಹತ್ವದ್ದಾಗಿರುವುದಿಲ್ಲ.

66. ತಪ್ಪು ಮಾಡುವ ಅವಕಾಶ ನೀಡದೆ- ನಾವು ನಮ್ಮ ದೇವರಿಗೆ ಅಗೌರವ ತೋರಿಸುತ್ತಿದ್ದೇವೆ.

67. ಒಬ್ಬರನ್ನೇ ಪ್ರೀತಿಸುವುದು ಕ್ರೌರ್ಯ. ಏಕೆಂದರೆ, ಅದು ಬೇರೆಯವರ ಪ್ರೀತಿ ಕಡೆಗಣಿಸಿದಂತೆ. - ಇದು ದೇವರ ಮೇಲಿನ ಪ್ರೀತಿಗೂ ಸಹ ಅನ್ವಯಿಸುತ್ತದೆ.

68. “ನಾನು ಇದನ್ನು ಮಾಡಿದೆ” ಎಂದು ನೆನಪು ಹೇಳಿದರೆ, “ನಾನು ಇದನ್ನು ಮಾಡಬಾರದಿತ್ತು” ಎಂದು ಗೌರವ ಹೇಳುತ್ತದೆ. ಗೌರವ ಸೋಲೊಪ್ಪಿಕೊಳ್ಳದಿರುವ ಕಾರಣ ಕೊನೆಗೆ ನೆನಪು ಸೋಲೊಪ್ಪಿಕೊಳ್ಳುತ್ತದೆ.

69. ಸೌಮ್ಯ ಸ್ವಭಾವ - ಕೆಲವೊಮ್ಮೆ ಜೀವನವನ್ನು ಸರ್ವನಾಶ ಮಾಡುತ್ತದೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವಾದರೆ, ನೀವು ಜೀವನವನ್ನು ಸೂಕ್ಷ್ಮವಾಗಿ ಗಮನಿಸಿಲ್ಲ ಎಂದರ್ಥ. 

70. ಒಬ್ಬನಿಗೆ ವ್ಯಕ್ತಿತ್ವವಿದೆ ಎಂದಲ್ಲಿ, ಅವನ ಜೀವನದ ಘಟನೆಗಳು ಪುನರಾವರ್ತಿಸುತ್ತವೆ.

71. ನೀವಿನ್ನೂ ನಕ್ಷತ್ರಗಳನ್ನು ಮೇಲೆ ಕಾಣುತ್ತಿರುವಂತೆಯೇ ನೋಡುತ್ತಿರುವಿರಾದರೆ, ನಿಮ್ಮಗಿನ್ನೂ ಜ್ಞಾನಿಯ ನೋಟ ಬಂದಿಲ್ಲ ಎಂದರ್ಥ.

72. ಮಹಾತ್ಮರಾಗುವುದು ಶಕ್ತಿಯಿಂದಲ್ಲ, ಶ್ರೇಷ್ಠ ಭಾವನೆಗಳ ಸ್ಥಿರತೆಯಿಂದ.

73. ತನ್ನ ಆದರ್ಶವನ್ನು ತಲುಪುವ ವ್ಯಕ್ತಿ, ಅದೇ ಕಾರಣಕ್ಕಾಗಿಯೇ ಅದನ್ನು ಮೀರಿ ಮುನ್ನಡೆಯುತ್ತಾನೆ.

73A. ಅನೇಕ ನವಿಲುಗಳು ತಮ್ಮ ಗರಿಗಳನ್ನು ಅಡಗಿಸಿಟ್ಟುಕೊಳ್ಳುತ್ತವೆ. ಮತ್ತು ಅದನ್ನು ಹೆಮ್ಮೆ ಎಂದುಕೊಳ್ಳುತ್ತವೆ.

74.  ಕೃತಜ್ಞತೆ ಮತ್ತು ಪರಿಶುದ್ದತೆ ಹೊಂದಿರದ ಬುದ್ದಿವಂತನನ್ನು ಸಹಿಸಿಕೊಳ್ಳುವುದು ಕಷ್ಟಸಾದ್ಯ.

75. ಮಾನವನ ಇಂದ್ರಿಯಾನುಭಾವದ ಮಟ್ಟ ಮತ್ತು ಸ್ವರೂಪವು ಅವನ ಚೇತನದ ಉತ್ತುಂಗವನ್ನು ತಲುಪುತ್ತದೆ.

76. ಶಾಂತಿಯ ದಿನಗಳಲ್ಲಿ ಒಬ್ಬ ಯೋಧ ತನ್ನ ಮೇಲೆ ತಾನೇ ಆಕ್ರಮಣ ಮಾಡಿಕೊಳ್ಳುತ್ತಾನೆ.

77. ತನ್ನ ಆದರ್ಶಗಳೊಂದಿಗೆ ಮಾನವನು ತನ್ನ ಸ್ವಭಾವಗಳನ್ನು ಬಲಪಡಿಸಲು, ಸಮರ್ಥಿಸಲು, ಗೌರವಿಸಲು, ನಿಂದಿಸಲು ಅಥವಾ ಮರೆಮಾಡಲು ಪ್ರಯತ್ನಿಸುತ್ತಾನೆ: ಒಂದೇ ಅದರ್ಶಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ಬಹುಶಃ ಮೂಲಭೂತವಾಗಿ ವಿಭಿನ್ನ ಗುರಿಗಳತ್ತ ಸಾಗುತ್ತಾರೆ.

78. ತನ್ನನ್ನು ತಿರಸ್ಕಾರದಿಂದ ಕಾಣುವ ವ್ಯಕ್ತಿ, ತಿರಸ್ಕಾರದಲ್ಲಿ ತಾನು ಅತ್ಯುತ್ತಮನೆಂದು ಮೆಚ್ಚಿಕೊಳ್ಳುತ್ತಾನೆ.

79. ತನಗೆ ಪ್ರೀತಿ ಸಿಗುತ್ತಿದೆ ಎಂದು ತಿಳಿದಿದ್ದರೂ, ತನ್ನನ್ನು ತಾನು ಪ್ರೀತಿಸಲಾರದ ಮನಸ್ಸಿನ ಆಳದಿಂದ ಕೆಸರು ಮೇಲೇಳುತ್ತದೆ.

80. ನಿಮ್ಮ ಸಂಪೂರ್ಣ ಅರಿವಿಗೆ ಬಂದ ಪ್ರತಿ ವಿಚಾರದ ಬಗ್ಗೆ ನೀವು ಯೋಚಿಸುವುದನ್ನು ನಿಲ್ಲಿಸುವಿರಿ. “ನಿನ್ನನ್ನು ಅರಿತುಕೋ” ಎಂಬ ದೇವರ ಸಲಹೆ “ನಿನ್ನ ಬಗ್ಗೆ ಯೋಚಿಸುವುದನ್ನು ನಿಲ್ಲಿಸು - ವಸ್ತುನಿಷ್ಠನಾಗು” ಎಂಬ ಅರ್ಥ ನೀಡುವುದೇ?. ಸಾಕ್ರೆಟಿಸ್? ವೈಜ್ಞಾನಿಕ ಮಾನವ?

81. ಸಮುದ್ರದ ದಡದಲ್ಲಿ ಬಾಯಾರಿಕೆಯಿಂದ ಸಾಯುವುದು ಭಯಾನಕ. ಭಾಯರಿಕೆ ತೀರಿಸದಷ್ಟು ನಿಮ್ಮ ಸತ್ಯಕ್ಕೆ ಉಪ್ಪು ಸೇರಿಸುವ ಅವಶ್ಯಕತೆ ಇದೆಯೇ?

82. ಪ್ರಿಯ ಸೋದರ, “ಎಲ್ಲರಿಗೂ ಕನಿಕರ ತೋರಿಸುವುದು” ನಿನಗೆ ಕ್ರೌರ್ಯವಾಗಬಹುದು.

83. ಸಹಜ ಪ್ರವೃತ್ತಿಗಳು (Insticts) - ಮನೆಗೆ ಬೆಂಕಿ ಬಿದ್ದಾಗ ಊಟವನ್ನು ಮರೆತಂತೆ- ಆದರೆ, ಬೂದಿಯಲ್ಲಿ ಊಟವನ್ನೇ ಹುಡುಕುತ್ತೇವೆ.

84. ತನ್ನ ಆಕರ್ಷಣೆ ಕಳೆದುಕೊಂಡ ಮಹಿಳೆ- ಅದೇ ಮಟ್ಟದಲ್ಲಿ ದ್ವೇಷಿಸುವುದನ್ನು ಕಲಿಯುತ್ತಾಳೆ.

85. ಗಂಡು ಮತ್ತು ಹೆಣ್ಣಿನಲ್ಲಿ ಅದೇ ಭಾವನೆಗಳು ವಿಭಿನ್ನ ಅಳತೆಯಲ್ಲಿರುವ ಕಾರಣ ಅವರಿಬ್ಬರ ಭಿನ್ನಾಭಿಪ್ರಾಯಗಳು ಎಂದಿಗೂ ಕೊನೆಯಾಗುವುದಿಲ್ಲ. 

86. ಹೆಣ್ಣಿಗಿರುವ ವೈಯಕ್ತಿಕ ಗರ್ವದ ಹಿಂದೆ, ಇಡೀ ಹೆಣ್ಣಿನ ಕುಲದ ಕಡೆಗಿನ ತಿರಸ್ಕಾರ ಅಡಗಿರುತ್ತದೆ.

87. ಹೃದಯವನ್ನು ಬಂದನದಲ್ಲಿಟ್ಟು ಚೇತನಕ್ಕೆ ಹಲವು ರೀತಿಯ ಸ್ವಾತಂತ್ರ್ಯ ಲಬಿಸುತ್ತದೆ - ನಾನು ಇದನ್ನು ಈ ಹಿಂದೆಯೂ ಹೇಳಿದ್ದೆ, ಜನ ನಂಬಲಿಲ್ಲ. ಈಗಾಗಲೇ ಇದರ ಅನುಭವ ಹೊಂದಿರುವವರಿಗೆ ಮಾತ್ರ ಇದನ್ನು ನಂಬಲು ಸಾದ್ಯ.

88. ಅತಿಯಾದ ಬುದ್ದಿವಂತರು ಮುಜುಗರಕ್ಕೊಳಗಾದಾಗ - ಕೆಲವರು ಅಪನಂಬಿಕೆ ಬೆಳೆಸಿಕೊಳ್ಳುತ್ತಾರೆ.

89. ಸಮಸ್ಯೆಗಳು ಬಂದಾಗ, ಒಂದು ಪ್ರಶ್ನೆ ಉದ್ಬವಿಸುತ್ತದೆ - ಸಮಸ್ಯೆಗಳನ್ನು ಎದುರಿಸುತ್ತಿರುವ ವ್ಯಕ್ತಿಯೇ ಸಮಸ್ಯೆಯೇ?

90. ಭಾರವಾದ, ವಿಷಾದಭರಿತ ವ್ಯಕ್ತಿಗಳು ಇತರರನ್ನು ವಿಚಲಿತಗೊಳಿಸುವ "ಪ್ರೀತಿ ಮತ್ತು ದ್ವೇಷ"ದ ಕಾರಣದಿಂದಲೇ ತಾತ್ಕಾಲಿಕವಾಗಿ ಸಕ್ರಿಯರಾಗುತ್ತಾರೆ.

91. ಅವನು ಹಿಮದಂತೆ ಶೀತ - ಅವನನ್ನು ಮುಟ್ಟಲು ಯತ್ನಿಸಿದ ಕೈ ಹಿಂದೆ ಸರಿಯುತ್ತದೆ - ಇದೇ ಕಾರಣಕ್ಕಾಗಿ ಹಲವರು ಅವನನ್ನು ಬೆಂಕಿಯ ಕೆಂಡವೆಂದು ಭಾವಿಸುತ್ತಾರೆ.

92. ಒಳ್ಳೆಯ ಹೆಸರು ಪಡೆಯಲು - ಒಂದಲ್ಲ ಒಂದು ಸಮಯದಲ್ಲಿ - ಪ್ರತಿಯೊಬ್ಬನೂ ತನ್ನನ್ನು ತಾನೇ ತ್ಯಾಗ ಮಾಡಿರುತ್ತಾನೆ. 

93. ಸಭ್ಯರಲ್ಲಿ ಯಾವುದೇ ದ್ವೇಷವಿರುವುದಿಲ್ಲ. ಇದಕ್ಕೆ ಕಾರಣ, ಅವರು ಅನ್ಯರನ್ನು ತಿರಸ್ಕಾರದಿಂದ, ಅಲಕ್ಷ್ಯದಿಂದ ಕಾಣುವುದಾಗಿರುತ್ತದೆ.

94. ಮಾನವ ಪಕ್ವವಾಗುವುದು, ತನ್ನ ಬಾಲ್ಯದಲ್ಲಿ ಆಟದಲ್ಲಿದ್ದ ಗಂಭೀರತೆಯನ್ನು ತಿರುಗಿ ಪಡೆದಾಗ.

95. ತನ್ನ ಅನೈತಿಕತೆಯ ಬಗೆಗೆ ನಾಚಿಕೆ ಪಡುವುದು, ಕೊನೆಯಲ್ಲಿ ತನ್ನ ನೈತಿಕತೆಯ ಬಗ್ಗೆ ನಾಚಿಕೆ ಪಡುವ ಮಾರ್ಗದ ನಡುವಿನ ಒಂದು ಹೆಜ್ಜೆಯಾಗಿದೆ.

96. ಮಾನವ ಜೀವನವನ್ನು ವುಲಿಸೆಸ್ ನೌಸಿಕಾಗೆ ವಿದಾಯ ಹೇಳಿದ ರೀತಿಯಲ್ಲಿರಬೇಕು- ಪ್ರೀತಿ ಮತ್ತು ಬಂಧಗಳಿಲ್ಲದ ಆಶೀರ್ವಾದದಿಂದ.

97. ಏನು? ಮಹಾತ್ಮನೇ? ನನ್ನ ನೋಟದಲ್ಲಿ ಅವನು ತನ್ನದೇ ಆದ ಆದರ್ಶ ವ್ಯಕ್ತಿತ್ವದ ನಟ ಮಾತ್ರ.

98. ತನ್ನ ಚೇತನಕ್ಕೆ ನೈತಿಕತೆಯ ಅರಿವಿದ್ದಾಗ, ಅದು ಕಚ್ಚುತ್ತಿದ್ದರೂ ಪ್ರೀತಿಯ ಮುತ್ತಿನಂತಿರುತ್ತದೆ.

99. ನಿರಾಶೆಯ ಮಾತುಗಳು- “ನಾನು ನನ್ನ ಪ್ರತಿದ್ವನಿಗಾಗಿ ಕಿವಿಗೊಟ್ಟೆ, ಕೇಳಿಸಿದ್ದೆಲ್ಲಾ ಕೇವಲ ಹೊಗಳಿಕೆಯ ಮಾತುಗಳು.

100. ನಾವು ನಮ್ಮನ್ನು ಅಷ್ಟು ಕಠಿಣರಲ್ಲವೆಂದು ನಂಬಿದ್ದೇವೆ, ಹಾಗಾಗಿ ನಾವು ಇತರರಿಂದ ದೂರ ಉಳಿಯುತ್ತೇವೆ.

101. ಆಳವಾದ ಜ್ನಾನವುಳ್ಳವನು, ತನ್ನನ್ನು ತಾನು ಪ್ರಾಣಿಯ ರೂಪದಲ್ಲಿರುವ ದೇವರು ಎಂದು ತಿಳಿಯಬಲ್ಲ.

102. ನೀವು ಪ್ರೀತಿಸುವ ವ್ಯಕ್ತಿಯೂ ಸಹ ನಿಮ್ಮನ್ನು ಪ್ರೀತಿಸುತ್ತಾರೆ ಎಂದು ತಿಳಿದಾಗ, ನಿಮಗೆ ಅವರ ಮೇಲಿನ ಮೆಚ್ಚುಗೆ ಕಡಿಮೆಯಾಗಬಹುದು. "ಏನು? ಅವಳು ನಿನ್ನನ್ನು ಪ್ರೀತಿಸುವಷ್ಟು ಸಾಮನ್ಯಳೆ? ಅಥವಾ ಅಷ್ಟೊಂದು ಮುರ್ಖಳೆ? - ಅಥವಾ - ಅಥವಾ "

103. ಸಂತೋಷದಲ್ಲಿರುವ ಅಪಾಯ - "ಪ್ರತಿಯೊಂದು ವಿಚಾರ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ನಾನು ನನ್ನ ಪ್ರತಿ ಹಣೆ ಬರಹವನ್ನು ಪ್ರೀತಿಸುತ್ತೇನೆ. - ಯಾರು ನನ್ನ ಹಣೆಬರಹವಾಗಲು ಇಚ್ಚಿಸುತ್ತೀರಿ?"

104. ಇಂದಿನ ಕ್ರಿಶ್ಚಿಯನ್ನರು ನಮ್ಮನ್ನು ಸುಡುವುದಿಲ್ಲ - ಕಾರಣ, ಅವರ ಮಾನವೀಯತೆ ಅಥವಾ ಪ್ರೀತಿಯಿಂದಲ್ಲ. ಆದರೆ, ಅವರ ಪ್ರೀತಿಯ ಬಲಹೀನತೆಯಿಂದ.

105. ಧಾರ್ಮಿಕ ಸುಳ್ಳು ಒಬ್ಬ ಸ್ವತಂತ್ರ ಚಿಂತಕನಿಗೆ, ಕೆಟ್ಟ ಉದ್ದೇಶದಿಂದ ಹೇಳಿದ ಸುಳ್ಳಿಗಿಂತಲೂ ಅಸಹನೀಯವಾಗಿರುತ್ತದೆ. ಇದೇ ಕಾರಣದಿಂದ ಚರ್ಚ್ ಗೆ ಹೋಲಿಸಿದಲ್ಲಿ ಸ್ವತಂತ್ರ ಚಿಂತಕರು ಕಡಿಮೆ ಪ್ರಭಾವ ಬೀರುತ್ತಾರೆ. ಇದು, ಅವರ ಆಲೋಚನೆಗಳು ಸ್ವತಂತ್ರವಾಗಿಲ್ಲ ಎಂಬುದನ್ನು ತೋರಿಸುತ್ತವೆ.

106. ಸಂಗೀತದ ಮೂಲಕ, ಉತ್ಸಾಹಗಳು ಸ್ವತಃ ಆನಂದವನ್ನು ಹೊಂದುತ್ತವೆ.

107. ಬಲವಾದ ವ್ಯಕ್ತಿತ್ವವುಳ್ಳವನು, ಒಮ್ಮೆ ನಿರ್ದರಿಸಿದ ಮೇಲೆ, ಎಂತಹ ಉತ್ತಮ ಪ್ರತಿವಾದಗಳಿಗೂ ಸಹ ಕಿವಿಮುಚ್ಚಿಕೊಳ್ಳುವನು. ಕೆಲವು ಸಲ ಬರುವ ಮೂರ್ಖತನದ ಇಚ್ಛೆ. 

108. ನೈತಿಕ ಕ್ರಿಯೆ ಎಂಬುದಿಲ್ಲ, ಎಲ್ಲವೂ ಕ್ರಿಯೆಯ ನೈತಿಕ ವ್ಯಾಖ್ಯಾನಗಳು ಮಾತ್ರ.

109. ಅಪರಾದಿಯು ತಾನು ಮಾಡಿದ ಅಪರಾದಕ್ಕೆ ಸಮಾನ ವ್ಯಕ್ತಿಯಲ್ಲ, ಅದ್ದರಿಂದ ಅವನು, ತಾನು ಮಾಡಿದ ಅಪರಾಧವನ್ನು ಕಡಿಮೆ ಮಟ್ಟದ್ದೆಂದು ಚಿತ್ರಿಸುತ್ತಾನೆ.

110. ಅಪರಾಧಿಯ ವಕೀಲರು, ಅಪರಾದದ ಭಾಯಾನಕಥೆಯನ್ನು ಅಪರಾಧಿಯ ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ಎಡವುತ್ತಾರೆ.

111. ಗೌರವಕ್ಕೆ ಪೆಟ್ಟು ಬಿದ್ದಾಗ, ನಮ್ಮ ಅಹಂಕಾರಕ್ಕೆ ಪೆಟ್ಟು ಬೀಳುವುದು ಬಹಳ ಕಷ್ಟವಾಗುತ್ತದೆ.

112. ನಂಬುವುದಕ್ಕಲ್ಲ, ಕೇವಲ ಆಲೋಚಿಸಲು ಮಾತ್ರ ಬದುಕುವವರಿಗೆ, ನಂಬುವವರೆಲ್ಲ ಗದ್ದಲ ಮಾದುವವರಂತೆ ಕಾಣುತ್ತಾರೆ. ಹಾಗೂ ಅವರಿಂದ ದೂರ ಉಳಿಯುತ್ತಾರೆ.

113. ನೀವು ಒಬ್ಬರನ್ನು ವಶಪಡಿಸಿಕೊಳ್ಳಲು ಬಯಸುವಿರಾದರೆ, ಅವರ ಮುಂದೆ ವಿನಮ್ರತೆಯಿಂದಿರಬೇಕು.

114. ಲೈಂಗಿಕ ಪ್ರೀತಿಯ ಬಗ್ಗೆ ಹೆಣ್ಣು ಅತಿಯಾದ ನಿರೀಕ್ಷೆ, ಮತ್ತು ಅದನ್ನು ವ್ಯಕ್ತಪಡಿಸುವಲ್ಲಿ ಸಂಕೋಚ ಪಡುವುದರಿಂದ, ಅವರ ದೃಷ್ಟಿಕೋನಗಳು ಶುರುವಿನಿಂದಲೇ ಹಾಳಾಗಿರುತ್ತವೆ.

115. ಆಟದಲ್ಲಿ ಪ್ರೀತಿ ಅಥವಾ ದ್ವೇಷಗಳಿಲ್ಲದೇ ಇದ್ದಾಗ, ಹೆಣ್ಣಿನ ಆಟವು ಪರಿನಾಮಕಾರಿಯಾಗಿರದೆ ಸಾದಾರಣವಾಗಿರುತ್ತದೆ.

116. ನಮ್ಮಲ್ಲಿರುವ ಕೆಟ್ಟತನವನ್ನು ಒಳ್ಳೆಯದೆಂದು ನಾವು ಸ್ವೀಕರಿಸುವ ಧೈರ್ಯ ಬಂದಾಗ, ನಮ್ಮ ಜೀವನದ ಮಹಾನ್ ಕ್ಷನಗಲಾಗಿರುತ್ತದೆ.

117. ನಿಮ್ಮಲ್ಲಿನ ಒಂದು ಭಾವನೆಯನ್ನು ಮೀರಿ ನಿಲ್ಲುವ ಇಚ್ಚಾ ಶಕ್ತಿಯು, ಇತರ ಕೆಲವು ಭಾವನೆಗಳಿಂದ ಪ್ರೇರೇಪಣೆಗೊಂಡ ಇಚ್ಚಾಶಕ್ತಿಯಷ್ಟೇ.

118. ಪ್ರಶಂಸಿಸುವ ಮುಗ್ದತೆ- ಯಾರಿಗೆ ತನ್ನನ್ನು ಮುಂದೆ ಯಾರಾದರೂ ಮೆಚ್ಚಿಕೊಳ್ಳಬಹುದು ಎಂಬುದರ ಊಹೆ ಸಹ ಇರುವುದಿಲ್ಲವೋ ಅವರಲ್ಲಿ ಮಾತ್ರ ಕಾಣಸಿಗುತ್ತದೆ.

119. ಕೆಲವೊಮ್ಮೆ ನಾವು ಕೆಸರನ್ನು ಎಷ್ಟು ದ್ವೇಷಿಸುತ್ತೇವೆಂದರೆ, ನಾವು ನಮ್ಮೊಳಗಿನ ಕೆಸರನ್ನು ಶುಚಿ ಮಾಡಿಕೊಳ್ಳಲು ಮುಂದಾಗುವುದಿಲ್ಲ- ಅದನ್ನು ವಿವರಿಸಿ ಬೆಂಬಲಿಸುತ್ತೀರಿ.

120. ದೈಹಿಕ ಆಕರ್ಷಣೆ ಪ್ರೇಮವನ್ನು ತುಂಬಾ ವೇಗವಾಗಿ ಬೆಳೆಸುತ್ತದೆ. ಹಾಗಾಗಿ ಅದರ ಬೇರುಗಳು ಬಲಹೀನವಾಗಿ ಮುರಿದುಹೋಗಬಹುದು.

121. ದೇವರು ಬರಹಗಾರನಾಗ ಬಯಸಿದಾಗ ಗ್ರೀಕ್ ಭಾಷೆ ಆರಿಸಿಕೊಂಡಿದ್ದು ಕುತೂಹಲಕಾರಿ, ಆದರೆ ದೇವರು ಗ್ರೀಕನ್ನೂ ಸಹ ಸರಿಯಾಗಿ ಕಲಿಯಲಿಲ್ಲ.

122. ಕೆಲವೊಮ್ಮೆ, ಹೊಗಳಿಕೆಯ ಮಾತು ಕೇಳಿದಾಗ ನಮಗೆ ಸಂತೋಷವಾಗುವುದು ಸ್ವಾರ್ಥ ಅಥವಾ ಗರ್ವದಿಂದಲ್ಲ- ಹೃದಯದ ವಿನವಂತಿಕೆಯಿಂದ.

123. ಸ್ವತಂತ್ರ ಪ್ರೇಮವನ್ನು ಸಹ ಮದುವೆಯ ಹೆಸರಿನಲ್ಲಿ ಹಾಳುಗೆಡವಲಾಗಿದೆ.

124. ಬೆಂಕಿ ಸುಡುವಾಗ ನಗುವ ವ್ಯಕ್ತಿ, ನೋವನ್ನು ಗೆದ್ದಿರುವನೆಂದು ಅರ್ಥವಲ್ಲ- ಎಲ್ಲಿ ನೋವಾಗುವುದು ಅಂದುಕೊಂಡ ಜಾಗದಲ್ಲಿ ನೋವಾಗದೇ ಇರುವುದರ ಖುಷಿ. ಒಂದು ರೂಪಕ.

125. ಒಬ್ಬ ವ್ಯಕ್ತಿಯ ಬಗ್ಗೆ ಅಭಿಪ್ರಾಯ ಬದಲಾಯಿಸುವಷ್ಟು ಆ ವ್ಯಕ್ತಿ ಬದಲಾದಾಗ- ನಮಗಾದ ಮಾನಸಿಕ ತೊಂದರೆಯನ್ನು ಆ ವ್ಯಕ್ತಿಯ ತಪ್ಪೆಂದು ಭಾವಿಸುತ್ತೇವೆ.

126. ರಾಷ್ಟ್ರ ಎಂಬುದು- ಕೆಲವೇ ಕೆಲವು ಮಹಾನ್ ಪುರುಷರನ್ನು ಸೃಷ್ಟಿಸಲಿಕ್ಕಾಗಿ ಪ್ರಕೃತಿ ತೆಗೆದುಕೊಳ್ಳುವ ತಪ್ಪು ದಾರಿ. ಆದರೆ ಸೃಷ್ಟಿಯ ನಂತರ ಮಹಾನ್ ವ್ಯಕ್ತಿಗಳನ್ನು ರಾಷ್ಟ್ರವೇ ಬದಿಗೊತ್ತುತ್ತದೆ.

127. ನಿಜವಾದ ಸ್ತ್ರೀಯರಿಗೆ ವಿಜ್ಞಾನ ಎಂಬುದು ನಾಚಿಕೆ ಸ್ವಭಾವದ ವಿರೋಧಿಯಾಗಿದೆ. ಅದು ಅವರಿಗೆ ಅವರ ಚರ್ಮದ ಒಳಗೆ- ಇನ್ನೂ ಹೆಚ್ಚಾಗಿ ತಮ್ಮ ಅಲಂಕಾರ ಹಾಗೂ ಉಡುಪಿನ ಒಳಗೆ ನೋಡಲು ಪ್ರಯತ್ನಿಸುತ್ತಿರುವಂತೆ ಅನ್ನಿಸುತ್ತದೆ.

128. ಕಠಿಣ ಸತ್ಯಗಳನ್ನು ಬೋಧಿಸಲು- ಹೆಚ್ಚು ಹೆಚ್ಚು ಇಂದ್ರಿಯಾಕರ್ಷಣೆಯ ವಿಧಾನಗಳನ್ನು ಬಳಸಬೇಕು.

129. ದೆವ್ವಗಳಿಗೆ ದೇವರ ಬಗ್ಗೆ ವಿಶಾಲ ದೃಷ್ಟಿಕೋನವಿರುವ ಕಾರಣ ದೇವರಿಂದ ದೂರವಿರುತ್ತವೆ - ಒಂದು ರೀತಿಯಲ್ಲಿ, ದೆವ್ವವೇ ಜ್ಞಾನದ ಮೊದಲ ಮಿತ್ರ.

130. ಒಬ್ಬ ವ್ಯಕ್ತಿಯ ಪ್ರತಿಭೆ ಕಡಿಮೆಯಾದಾಗ - ಅವನ ವಾಸ್ತವ ವ್ಯಕ್ತಿತ್ವ ಬಹಿರಂಗವಾಗುತ್ತದೆ. ಪ್ರತಿಭೆಯು ವ್ಯಕ್ತಿತ್ವದ ಅಲಂಕಾರವೂ ಹೌದು, ಪರದೆಯೂ ಹೌದು.

131. ಪುರುಷರು ಮತ್ತು ಮಹಿಳೆಯರು ತಮ್ಮ ಪರಸ್ಪರ ತಪ್ಪು ಭ್ರಮೆಗೆ ಬೀಳುತ್ತಾರೆ; ಕಾರಣ, ಅವರು ಪ್ರೀತಿಸುತ್ತಿರುವುದು ತಮ್ಮದೇ ಆದ ಆದರ್ಶ ಪ್ರತಿಬಿಂಬವನ್ನು. ಪುರುಷನು ಮಹಿಳೆಯು ಶಾಂತ ಸ್ವರೂಪಿ ಆಗಿರಬೇಕೆಂದು ಬಯಸುತ್ತಾನೆ. ಆದರೆ, ಮಹಿಳೆ ಹೊರಗೆ ಮೃದುತನ ಪ್ರದರ್ಶಿಸಿದರೂ ಸಹ ಆಳದಲ್ಲಿ ಅವಳು ತೊಳಲಾಟಕ್ಕೆ ಸಿಕ್ಕಿರುತ್ತಾಳೆ ಅಥವಾ ಆಕ್ರಮಣಕಾರಿಯಾಗಿರುತ್ತಾಳೆ.

132. ಒಬ್ಬನನ್ನು ದಂಡಿಸಲಾಗುವ ಅತಿ ಪ್ರಮುಖ ಕಾರಣವೆಂದರೆ- ಆತನ ಸದ್ಗುಣಗಳು.

133. ತನ್ನ ಆದರ್ಶಗಳನ್ನು ತಲುಪಲು ಬೇಕಾದ ಮಾರ್ಗ ಪತ್ತೆಹಚ್ಚಲಾರದ ವ್ಯಕ್ತಿ, ಆದರ್ಶವೇ ಇಲ್ಲದವನಿಗಿಂತ ಹಾಯಾಗಿ ಮತ್ತು ನಿರ್ಲಜ್ಜೆಯಿಂದಲೂ ಬದುಕುತ್ತಾನೆ.

134. ಒಳ್ಳೆಯ ಅರಿವಿಗೆ, ನಂಬಿಕೆಗೆ, ಸತ್ಯದ ಸಾಕ್ಷಿಗೂ ಮೂಲವೆಂದರೆ ನಮ್ಮ ಇಂದ್ರಿಯಗಳು.

135. ಡಾಂಬಿಕ ಮೌಲ್ಯಗಳನ್ನು ಹೊಂದಿದವನು ಸಮಾಜಕ್ಕೆ ತನ್ನ ಮೌಲ್ಯಗಳನ್ನು ಇನ್ನೂ ಗಟ್ಟಿಯಾಗಿ ತೋರಿಸಿಕೊಳ್ಳಲು ಯತ್ಬಿಸುತ್ತಾರೆ. ಸಮಾಜದ ಪ್ರಕಾರ ಒಳ್ಳೆಯವರಾಗಲು ಇದು ಬಹಳ ಅವಶ್ಯಕ.

136. ಒಬ್ಬ ತನ್ನ ಆಲೋಚನೆಗಳನ್ನು ಹೊರ ತೆಗೆಯಲು ಸಹಾಯಕ್ಕಾಗಿ ಹುಡುಕುತ್ತಾನೆ. ಇನ್ನೊಬ್ಬ ಸಹಾಯ ಮಾಡಲು ಹುಡುಕುತ್ತಾನೆ. ಇವರಿಬ್ಬರಿಗೂ ಉತ್ತಮ ಸಂಭಾಷಣೆ ಏರ್ಪಡುತ್ತದೆ.

137. ಜ್ಞಾನಿಗಳು ಹಾಗೂ ಕಲಾವಿದರ ಜೊತೆಗಿನ ಸಂಭಾಷಣೆಯಲ್ಲಿ ನಾವು ಎರಡು ತದ್ವಿರುದ್ಧ ತಪ್ಪುಗಳನ್ನು ಮಾಡುತ್ತೇವೆ. ಒಬ್ಬ ಅದ್ಬುತ ಪಂಡಿತ ಸಾಮಾನ್ಯ ವ್ಯಕ್ತಿತ್ವ ಹೊಂದಿರಬಹುದು,  ಮತ್ತು ಕೆಲವೊಮ್ಮೆ ಒಬ್ಬ ಸಾಮಾನ್ಯ ಕಲಾವಿದ ವಿಶಿಷ್ಟ ವ್ಯಕ್ತಿತ್ವ ಹೊಂದಿರುತ್ತಾನೆ.

138. ನಾವು ಎಚ್ಚರವಾಗಿದ್ದಾಗಲೂ ಕನಸುಗಳಲ್ಲಿರುವಂತೆಯೇ ನಡೆದುಕೊಳ್ಳುತ್ತೇವೆ. ನಾವು ಇತರರನ್ನು ನಮ್ಮ ಕಲ್ಪನೆಯಲ್ಲಿ ಸೃಷ್ಟಿಸಿಕೊಂಡು ತಕ್ಷಣವೇ ಮರೆತುಬಿಡುತ್ತೇವೆ.

139. ಪ್ರೇಮ ಹಾಗೂ ಪ್ರತೀಕಾರದಲ್ಲಿ ಹೆಣ್ಣು ಗಂಡಿಗಿಂತಲೂ ಹೆಚ್ಚು ಆಕ್ರಮಣಶೀಲತೆ ಹೊಂದಿರುತ್ತಾಳೆ.

140. ಬಂಧನ ಮುರಿಯದಿರಲೆಂದು ಬಯಸುವಿರಾದರೆ- ನೀವೇ ಮೊದಲು ಕಚ್ಚಿ ನೋಡಿ. ಬಂಧನ ಬಲವಾಗಿ ನಿಲ್ಲುತ್ತದೆ.

141. ಮಾನವ ತಾನೇ ದೇವರೆಂದು ನಂಬದಿರಲು ಪ್ರಮುಖ ಕಾರಣ- ಹೊಟ್ಟೆ.

142. ನಾನು ಕೇಳಿದ ಪರಿಶುದ್ಧ ಮಾತು- “ ನಿಜವಾದ ಪ್ರೀತಿಯಲ್ಲಿ, ದೇಹ ಆತ್ಮದ ಒಳಗೆ ಅಡಗಿರುತ್ತದೆ.

143. ನಮ್ಮ ಪ್ರಶಂಸೆಯ ಹಂಬಲ ಬಯಸುವುದು- ನಾವು ಸುಲಭವಾಗಿ ಮಾಡಬಲ್ಲದ್ದನ್ನು ಇತರರಿಗೆ ಕಠಿಣ ಕಾರ್ಯದಂತೆ ಪ್ರದರ್ಶಿಸುವುದು. ಇದೇ ನೈತಿಕ ವ್ಯವಸ್ಥೆಯ ಮೂಲ.

144. ಮಹಿಳೆ ಪಾಂಡಿತ್ಯದ ಕಡೆ ಆಕರ್ಷಣೆ ಪ್ರದರ್ಶಿಸಿದಾಗ, ಸಾಮಾನ್ಯವಾಗಿ ಅದು ಆಕೆಯ ಹೆಣ್ಣತನದಲ್ಲಿರುವ ಸಮಸ್ಯೆಯನ್ನು ತೋರಿಸುತ್ತದೆ. ಬಂಜೆತನವೇ ಕೆಲವೊಮ್ಮೆ ಪುರುಷರ ಜ್ಞಾನದ ರುಚಿಗೆ ಕಾರಣವಾಗುತ್ತದೆ. - ಪುರುಷ ಒಂದು ಬಂಜೆತನದ ಜಂತು 

145. ಗಂಡು ಹೆಣ್ಣಿನ ಒಂದು ಸಾಮಾನ್ಯ ಹೋಲಿಕೆ, ಹೆಣ್ಣು ಅಲಂಕರಿಸುವಲ್ಲಿ ಉತ್ತಮ ಕೌಶಲ್ಯ ಹೊಂದಿರುತ್ತಾಳೆ ಎನ್ನಲು ಕಾರಣ, ಮಹಿಳೆಯರು ಹೆಚ್ಚಾಗಿ ಬೆಂಬಲಿಸುವ ಪಾತ್ರ ವಹಿಸುತ್ತಾರೆ.

146. ರಾಕ್ಷಸರೊಂದಿಗೆ ಹೋರಾಡುವ ವ್ಯಕ್ತಿ, ಹೋರಾಟದ ಹಾದಿಯಲ್ಲಿ ಸ್ವತಃ ತಾನೇ ರಾಕ್ಷಸನಾಗುವ ಸಂಭವವಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗೂ ದೀರ್ಘ ಅವಧಿಯವರೆಗೆ ಅಂಧಕಾರವನ್ನು ನೋಡಿದರೆ ಅಂಧಕಾರವೂ ನಿಮ್ಮನ್ನು ನೋಡುತ್ತದೆ. 

147. ಹಳೆಯ ಕಥೆ ಹಾಗೂ ನಿಜ ಜೀವನದಿಂದ - "ಒಳ್ಳೆಯ ಮತ್ತು ಕೆಟ್ಟ ಹೆಂಗಸರಿಬ್ಬರಿಗೂ ಬೆತ್ತ ಬೇಕು"

148. ನೆರೆಯವರು ತಮಗೆ ಅನುಕೂಲಕರ ರೀತಿಯಲ್ಲಿ ಯೋಚಿಸುವಂತೆ ಮಾಡುವುದು, ನಂತರ ಅವರ ಮಾತನ್ನು ಸಂಪೂರ್ಣ ಸತ್ಯವೆಂಬಂತೆ ನಂಬುವುದು - ಇಂತಹ ಒಂದು ಜಾದೂ ಮಹಿಳೆಯರ ಹೊರತು ಇನ್ಯಾರು ಮಾಡಬಲ್ಲರು. 

149. ಒಂದು ಕಾಲದಲ್ಲಿ "ಕೆಟ್ಟದ್ದು" ಎಂದು ಪರಿಗಣಿಸಲ್ಪಡುವ ಒಂದು ವಿಚಾರ, ಹಿಂದಿನ ಕಾಲಗಳಲ್ಲಿ "ಒಳ್ಳೆಯದು" ಎನ್ನಿಸಿಕೊಂಡದ್ದರ ಪ್ರತಿಧ್ವನಿಯಾಗಿರುತ್ತದೆ- ಮರಳಿ ಕಾಣಿಸಿಕೊಂಡ ಹಳೆಯ ಆದರ್ಶದಂತೆ. 

150. ಒಬ್ಬ ಶೂರನ ಸುತ್ತ ದುಖ್ಖಬರಿತ ನಾಟಕಗಳು ನಡೆದರೆ, ದೇವಮಾನವರ ಸುತ್ತ ವಿನೋದಭರಿತ ನಾಟಕಗಳು ನಡೆಯುತ್ತವೆ ಹಾಗೂ ದೇವರ ಸುತ್ತ ಏನು ನಡೆಯುತ್ತದೆ? ಒಂದು ಇಡೀ ವಿಶ್ವ?

151. ಪ್ರತಿಭೆ ಹೊಂದಿರುವುದಷ್ಟೇ ಸಾಕಾಗುವುದಿಲ್ಲ, ಅದಕ್ಕೆ ಅನುಮತಿಯೂ ಬೇಕಾಗುತ್ತದೆ. ಹೌದಲ್ಲವೇ ಗೆಳೆಯರೇ?

152. "ಜ್ಞಾನದ ಮರವಿದ್ದಲ್ಲಿ, ಸದಾ ಸ್ವರ್ಗವಿರುತ್ತದೆ." - ಇದನ್ನು ಪುರಾತನ ಹಾಗೂ ಆದುನಿಕ ಹಾವುಗಳು ಹೇಳುತ್ತವೆ. 

153. ಪ್ರೀತಿಯಿಂದ ಮಾಡಿದ ಯಾವುದೇ ಕಾರ್ಯವು ಒಳಿತು ಮತ್ತು ಕೆಡುಕುಗಳನ್ನು ಮೀರಿದ್ದಾಗಿರುತ್ತದೆ. 

154. ವಿರೋಧ ವ್ಯಕ್ತಪಡಿಸುವುದು, ತಪ್ಪಿಸಿಕೊಳ್ಳುವುದು, ಸಂತೋಷದಿಂದ ಸಂಶಯಿಸುವುದು ಮತ್ತು ವ್ಯಂಗ್ಯವನ್ನು ಪ್ರೀತಿಸುವುದು, ಇವೆಲ್ಲವೂ ಆರೋಗ್ಯಕರ ಮೆದುಳಿನ ಲಕ್ಷಣಗಳು;  ಸಂಪೂರ್ಣವಾಗಿ ನಿಶ್ಚಲವಾದುದೆಲ್ಲಾ ಅನಾರೋಗ್ಯದ ಲಕ್ಷಣಗಳು. 

155. ದುಃಖ್ಖದ ಅನುಭವವು ಇಂದ್ರಿಯ ಸುಖದ ಜೊತೆಗೆ ಹೆಚ್ಚು ಅಥವಾ ಕಡಿಮೆ ಆಗುತ್ತದೆ.

156. ಒಬ್ಬ ವ್ಯಕ್ತಿಯಲ್ಲಿ ಹುಚ್ಚು ಅಪರೂಪವಾಗಿರಬಹುದು. ಆದರೆ ಗುಂಪುಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ, ರಾಷ್ಟ್ರಗಳಲ್ಲಿ ಮತ್ತು ಕಾಲ ಗಟ್ಟಗಳಲ್ಲಿ ಇದು ಸರ್ವೆ ಸಾಮಾನ್ಯ.

157. ಆತ್ಮಹತ್ಯೆಯ ಆಲೋಚನೆ ಒಂದು ರೀತಿಯ ಸಮಾಧಾನ ನೀಡುತ್ತದೆ; ಇದು ಅನೇಕ ಕಷ್ಟದ ರಾತ್ರಿಗಳನ್ನು ಸಹಿಸಿಕೊಳ್ಳಲು ಸಹಾಯ ಮಾಡುತ್ತದೆ.

158. ನಮ್ಮ ಆಲೋಚನಾ ಶಕ್ತಿ ಮಾತ್ರವಲ್ಲ, ನಮ್ಮ ಮನಸ್ಸಾಕ್ಷಿಯೂ ಸಹ ನಮ್ಮೊಳಗಿನ ಬೃಹತ್ ಆಸೆಯ ಮುಂದೆ ಶರಣಾಗುತ್ತದೆ. ಅದು ನಮ್ಮೊಳಗಿನ ಧಣಿ.

159. ನಾವೂ ಒಳ್ಳೆಯದು ಹಾಗೂ ಕೆಟ್ಟದ್ದು ಎರಡನ್ನೂ ಸಹ ಹಿಂದುರಿಗಿಸಬೇಕು. ಆದರೆ, ನಮಗೆ ಒಳ್ಳೆಯದು ಮತ್ತು ಕೆಟ್ಟದ್ದು ಮಾಡಿದ ವ್ಯಕ್ತಿಯೆದುರಿಗೆ ಮಾತ್ರ ಏಕೆ?

160. ನಾವು ನಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಂಡ ಮೇಲೆ ಅದನ್ನು ಮೊದಲು ಇಷ್ಟ ಪಟ್ಟಷ್ಟು ಪಡುವುದಿಲ್ಲ.

161. ಕವಿಗಳು ಯಾವುದೇ ನಾಚಿಕೆಯಿಲ್ಲದೇ ತಮ್ಮ ಸ್ವಂತ ಜೀವನದ ಅನುಭವಗಳನ್ನು ತಮ್ಮ ಕವನಗಳಲ್ಲಿ ಬಳಸಿಕೊಳ್ಳುತ್ತಾರೆ.

162. ಪ್ರತಿಯೊಂದು ರಾಷ್ಟ್ರವು ಯೋಚಿಸುವ ವಿಧಾನ- “ನಮ್ಮ ಸಹಪಾಠಿಗಳು ನಮ್ಮ ನೆರೆಹೊರೆಯವರಲ್ಲ, ನೆರೆಹೊರೆಯವರಿಂದಾಚೆ ಇರುವವರು”.

163. ಪ್ರೇಮವು ಒಬ್ಬ ವ್ಯಕ್ತಿಯ ಉತ್ತಮ ಮತ್ತು ಅಡಗಿಕೊಂಡ ಗುಣಗಳನ್ನು ಹೊರಗೆಳೆಯುತ್ತದೆ - ಅವನ ಅಪರೂಪದ ಹಾಗೂ ವಿಶೇಷ ಗುಣಗಳನ್ನು. ಆದ್ದರಿಂದಲೇ, ಪ್ರೇಮವು ಆ ವ್ಯಕ್ತಿಯ ಸಹಜ ಸ್ವಭಾವದ ಬಗ್ಗೆ ನಮಗೆ ಸಂಶಯಾಸ್ಪದ ಭಾವನೆ ನೀಡುತ್ತದೆ.

164. ಯೇಸು ಯಹೂದಿಯರಿಗೆ ಹೇಳಿದ ಮಾತು- “ಕಾನೂನು ಸೇವಕರಿಗಾಗಿ ಇದೆ; ದೇವರನ್ನು ನಾನು ದೇವರ ಮಗನಾಗಿ ಪ್ರೀತಿಸುವಂತೆ ನೀವೂ ಪ್ರೀತಿಸಿರಿ. ನಾವು ದೇವರ ಮಕ್ಕಳಾದ ಮೇಲೆ ನೀತಿ ನಿಯಮಗಳ ಜೊತೆ ನಮಗೇನು ಸಂಬಂಧ?”

165. ಪ್ರತಿ ಕುರಿಮಂದೆಗೆ ದಾರಿ ತೋರಲು ಒಬ್ಬ ನಾಯಕ ಕುರಿಯ ಅಗತ್ಯತೆಯಿರುತ್ತದೆ. ಅಥವಾ ಕೆಲವೊಮ್ಮೆ ಕುರಿಗಾಹಿಯೇ ಆ ನಾಯಕ ಕುರಿಯ ಪಾತ್ರ ವಹಿಸಬೇಕಾಗುತ್ತದೆ.

166. ಒಬ್ಬ ತನ್ನ ನಾಲಿಗೆಯಿಂದ ಸುಳ್ಳು ಹೇಳಬಹುದು, ಆದರೆ ಅವನ ಮುಖಭಾವದಲ್ಲಿ ಸತ್ಯವನ್ನು ಮುಚ್ಚಿಡಲಾರ.

167. ಶಕ್ತಿಶಾಲಿ ಮತ್ತು ಜಾಗೃತ ವ್ಯಕ್ತಿಗಳು ಇತರರೊಂದಿಗೆ ಹತ್ತಿರವಾಗಲು ನಾಚಿಕೆ ವ್ಯಕ್ತಪಡಿಸುತ್ತಾರೆ. ಆದರೆ, ಅದು ಅತ್ಯಮೂಲ್ಯವೆಂದು ಅರಿತಿರುತ್ತಾರೆ.

168. ಕ್ರಿಶ್ಚಿಯನ್ ಧರ್ಮವು ಎರೋಸ್ (ಪ್ರೇಮದ ದೇವರು) ಗೆ ವಿಷ ಕುಡಿಯಲು ಕೊಟ್ಟಿತು. ಅವನು ಸಾಯಲಿಲ್ಲ. ಆದರೆ ಅದು ದುಷ್ಕರ್ಮವಾಯಿತು.

169. ತಮ್ಮ ಬಗ್ಗೆ ಹೆಚ್ಚು ಹೆಚ್ಚು ಮಾತನಾಡುವುದು ಕೆಲವೊಮ್ಮೆ ತಮ್ಮ ನಿಜ ಸ್ವಭಾವವನ್ನು ಮುಚ್ಚಿಡುವ ಮಾರ್ಗವಾಗಬಹುದು.

170. ಒಬ್ಬ ವ್ಯಕ್ತಿಯನ್ನು ದೂಷಣೆ ಮಾಡುವ ಸಮಯಕ್ಕಿಂತ ಹೆಚ್ಚಾಗಿ, ಪ್ರಶಂಸೆ ಮಾಡುವಾಗ ಆ ವ್ಯಕ್ತಿಯ ವಿಷಯದಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡಿರುತ್ತೇವೆ.

171. ಜ್ಞಾನಿಗೆ ಸಹಾನುಭೂತಿ ವ್ಯಕ್ತ ಪಡಿಸುವುದು ಹಾಸ್ಯಸ್ಪದ. ಒಂಟಿಕಣ್ಣಿನ ದೈತ್ಯನಿಗೆ ಮೃದುವಾದ ಕೈಗಳು ಮುಟ್ಟಿದಂತೆ.

172. ಒಬ್ಬ ವ್ಯಕ್ತಿ ಇಡೀ ಮಾನವಕುಲದ ಮೇಲಿನ ಪ್ರೀತಿಯಿಂದ ಯಾವುದಾದರೂ ಇನ್ನೊಂದು ವ್ಯಕ್ತಿಯನ್ನು ಪ್ರೀತಿಸುತ್ತಾನೆ (ಕಾರಣ: ಒಬ್ಬನೇ ಎಲ್ಲರನ್ನೂ ಪ್ರೀತಿಸುವುದು ಅಸಾಧ್ಯ); ಆದರೆ ಈ ವಿಚಾರವನ್ನು ಆ ವ್ಯಕ್ತಿಯೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು.

173. ನೀವು ಒಬ್ಬ ವ್ಯಕ್ತಿಯನ್ನು ಕೆಳಮಟ್ಟದಲ್ಲಿ ನೋಡುವುದಾದರೆ ಅವರನ್ನು ನೀವು ದ್ವೇಷಿಸಲಾರಿರಿ. ಆ ವ್ಯಕ್ತಿ ನಿಮಗೆ ಸಮಾನ ಅಥವಾ ಉತ್ತಮ ಎನಿಸಿದಾಗ ಮಾತ್ರ ದ್ವೇಷ ಆರಂಭವಾಗುತ್ತದೆ.

174. ಉಪಯೋಗಕ್ಕೆ ಬರುವುದೆಲ್ಲವನ್ನೂ ಮಹತ್ವದ್ದೆಂದು ನೋಡುವ ಉಪಯುಕ್ತವಾದಿಗಳೇ, ನೀವು ಸಹ ಉಪಯೋಗವನ್ನು ಮೆಚ್ಚುವುದು ಅದು ನಿಮಗೆ ಬೇಕಾದ್ದನ್ನು ನೀಡುತ್ತದೆ ಎನ್ನುವ ಕಾರಣಕ್ಕಾಗಿ. ಆದರೆ ನೀವೂ ಸಹ ಅದು ಕೆಲಸ ಮಾಡುವ ನಿಧಾನಗತಿ ಹಾಗೂ ಗಲಾಟೆ ಇಷ್ಟವಾಗುವುದಿಲ್ಲ.

175. ಒಬ್ಬನು ಕೊನೆಗೆ  ತಾನು ಬಯಸುವ ವಸ್ತುವನ್ನು ಪ್ರೀತಿಸುವುದಿಲ್ಲ. ಬದಲಿಗೆ ತನ್ನ ಬಯಕೆಯನ್ನೇ ಪ್ರೀತಿಸುತ್ತಾನೆ.

176. ನಮ್ಮ ಗರ್ವಕ್ಕೆ ಹೊಡೆತ ಬಿದ್ದಾಗ ಮಾತ್ರ ಇತರರ ಗರ್ವದ ಬಗೆಗೆ ನಮಗೆ ಅಸಹನೆ ಬೆಳೆಯುತ್ತದೆ.

177. “ಸತ್ಯ” ಎಂದರೆ ಏನು ಎಂಬ ವಿಚಾರದಲ್ಲಿ, ಇದುವರೆಗೂ ಯಾರೊಬ್ಬರೂ ಸತ್ಯವಂತರಾಗಿ ನಡೆಯಲಿಲ್ಲ.

178. ಒಬ್ಬ ಬುದ್ಧಿವಂತ ದಡ್ಡ ಕೆಲಸಗಳನ್ನು ಮಾಡುತ್ತಾನೆ ಎಂದು ಜನ ನಂಬುವುದಿಲ್ಲ. ಈ ರೀತಿಯ ಯೋಚನೆ ಮಾನವನ ಮೂಲ ಹಕ್ಕನ್ನೇ ಕಿತ್ತುಕೊಂಡಂತೆ- ತಪ್ಪು ಮಾಡುವ ಹಕ್ಕು.

179. ನಾವು ಮಾಡಿದ ಕೆಲಸದ ಪಲಿತಾಂಶ ನಮ್ಮನ್ನು ಸುಲಭವಾಗಿ ಬಿಡುವಂತಹದ್ದಲ್ಲ. ಅವು, ನಾವು ಪರಿವರ್ತನೆ ಹೊಂದಿದ್ದೇವೆ ಎಂಬ ವಿಚಾರವನ್ನು ಗಣನೆಗೆ ಸಹ ತೆಗೆದುಕೊಳ್ಳುವುದಿಲ್ಲ.

180. ಕೆಲವರು ಬಹಳ ನಿಷ್ಠೆಯಿಂದ ಸುಳ್ಳು ಹೇಳುತ್ತಾರೆ. ಕಾರಣ, ಅದರ ಉದ್ದೇಶದ ಮೇಲೆ ಅವರಿಗಿರುವ ಅತಿಯಾದ ನಂಬಿಕೆ. ಇದು ಅವರ ನಂಬಿಕೆಯನ್ನು ಪ್ರದರ್ಶಿಸುತ್ತದೆಯೇ ಹೊರತು ಕೆಟ್ಟ ಉದ್ದೇಶವನ್ನಲ್ಲ.

181. ಒಬ್ಬರು ನಿಮ್ಮನ್ನು ಶಪಿಸುವಾಗ ನೀವು ಅವರನ್ನು ಆಶೀರ್ವದಿಸುವುದು ಅಮಾನವೀಯ.

182. ನಮಗಿಂತ ಮೇಲಿನವರು ನಮ್ಮ ಜೊತೆ ಆತ್ಮೀಯತೆಯಿಂದ ನಡೆದುಕೊಂಡಾಗ ನಮಗೆ ಕಹಿ ಅನುಭವವಾಗುತ್ತದೆ. ಕಾರಣ- ನಾವೂ ಅದೇ ರೀತಿ ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರುವುದು.

183. ನೀನು ಸುಳ್ಳು ಹೇಳಿದ ಕಾರಣಕ್ಕೆ ನನಗೆ ನೋವಾಗಲಿಲ್ಲ. ಆದರೆ, ಇನ್ನು ಮುಂದೆ ನಿನ್ನನ್ನು ನಂಬಲಾಗುವುದಿಲ್ಲ ಎಂಬುದೇ ನನ್ನ ನೋವಿಗೆ ಕಾರಣ.

184. ಕೆಲವೊಮ್ಮೆ ಕೆಲವರು ಬಹಳ ಗರ್ವದಿಂದ ಸಹಾಯ ಮಾಡುತ್ತಾರೆ. ಅದು ನಿಜವಾಗಿ ಸಹಾಯದಂತೆ ಕಾಣದೆ, ಕ್ರೂರನಡೆಯಂತೆ ಕಾಣುತ್ತದೆ.

185. ಯಾರಾದರೂ “ನನಗೆ ಅವನು ಇಷ್ಟವಿಲ್ಲ” ಎಂದಾಗ, “ನಾನು ಅವನಿಗೆ ಸಮನಲ್ಲ” ಎಂದು ಯಾರಾದರೂ ಪ್ರಾಮಾಣಿಕ ಉತ್ತರ ಕೊಟ್ಟಿದ್ದುಂಟೆ?

Comments

Popular posts from this blog

Prejudices of Philosophers - ತತ್ತ್ವಜ್ಞಾನಿಗಳ ಪೂರ್ವಗ್ರಹಗಳು