Posts

Showing posts from May, 2025

APOPHTHEGMS AND INTERLUDES - ಜ್ನಾನೋಕ್ತಿಗಳು ಮತ್ತು ಮದ್ಯಂತರ ಬರಹಗಳು

63. ಒಬ್ಬ ನಿಜವಾದ ಗುರು- ತನ್ನ ಶಿಷ್ಯರ ಹಿತಾಸಕ್ತಿಯಲ್ಲಿ ಮಾತ್ರ- ತಮ್ಮನ್ನು ಹಾಗೂ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. 64. ಕೇವಲ ತಿಳುವಳಿಕೆಗಾಗಿ ಪಡೆದುಕೊಳ್ಳುವ ಜ್ಞಾನ- ನೈತಿಕ ಮೌಲ್ಯಗಳ  ಒಂದು ಜಾಲವಾಗಿದೆ. ಜ್ಞಾನದ ಮೇಲಿನ ನಂಬಿಕೆ ನಮ್ಮನ್ನು ಆ ಜಾಲದ ಒಳಗೆ ಸೆಳೆಯುತ್ತದೆ. 65. ಸಾಕಷ್ಟು ಅವಮಾನ ಅನುಭವಿಸದೇ ಪಡೆದ ಜ್ಞಾನ- ಅಷ್ಟು ಮಹತ್ವದ್ದಾಗಿರುವುದಿಲ್ಲ. 66. ತಪ್ಪು ಮಾಡುವ ಅವಕಾಶ ನೀಡದೆ- ನಾವು ನಮ್ಮ ದೇವರಿಗೆ ಅಗೌರವ ತೋರಿಸುತ್ತಿದ್ದೇವೆ. 67. ಒಬ್ಬರನ್ನೇ ಪ್ರೀತಿಸುವುದು ಕ್ರೌರ್ಯ. ಏಕೆಂದರೆ, ಅದು ಬೇರೆಯವರ ಪ್ರೀತಿ ಕಡೆಗಣಿಸಿದಂತೆ. - ಇದು ದೇವರ ಮೇಲಿನ ಪ್ರೀತಿಗೂ ಸಹ ಅನ್ವಯಿಸುತ್ತದೆ. 68. “ನಾನು ಇದನ್ನು ಮಾಡಿದೆ” ಎಂದು ನೆನಪು ಹೇಳಿದರೆ, “ನಾನು ಇದನ್ನು ಮಾಡಬಾರದಿತ್ತು” ಎಂದು ಗೌರವ ಹೇಳುತ್ತದೆ. ಗೌರವ ಸೋಲೊಪ್ಪಿಕೊಳ್ಳದಿರುವ ಕಾರಣ ಕೊನೆಗೆ ನೆನಪು ಸೋಲೊಪ್ಪಿಕೊಳ್ಳುತ್ತದೆ. 69. ಸೌಮ್ಯ ಸ್ವಭಾವ - ಕೆಲವೊಮ್ಮೆ ಜೀವನವನ್ನು ಸರ್ವನಾಶ ಮಾಡುತ್ತದೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವಾದರೆ, ನೀವು ಜೀವನವನ್ನು ಸೂಕ್ಷ್ಮವಾಗಿ ಗಮನಿಸಿಲ್ಲ ಎಂದರ್ಥ.  70. ಒಬ್ಬನಿಗೆ ವ್ಯಕ್ತಿತ್ವವಿದೆ ಎಂದಲ್ಲಿ, ಅವನ ಜೀವನದ ಘಟನೆಗಳು ಪುನರಾವರ್ತಿಸುತ್ತವೆ. 71. ನೀವಿನ್ನೂ ನಕ್ಷತ್ರಗಳನ್ನು ಮೇಲೆ ಕಾಣುತ್ತಿರುವಂತೆಯೇ ನೋಡುತ್ತಿರುವಿರಾದರೆ, ನಿಮ್ಮಗಿನ್ನೂ ಜ್ಞಾನಿಯ ನೋಟ ಬಂದಿಲ್ಲ ಎಂದರ್ಥ. 72. ಮಹಾತ್ಮರಾಗುವುದು ಶಕ್...

Prejudices of Philosophers - ತತ್ತ್ವಜ್ಞಾನಿಗಳ ಪೂರ್ವಗ್ರಹಗಳು

1 ಸತ್ಯದ ಇಚ್ಚೆ , ಇದು ಅನೇಕ ಅಪಾಯಕಾರಿ ಸಂಶೋಧನೆಗಳಿಗೆ  ನಮ್ಮನ್ನು ಪ್ರಚೋದಿಸಿದೆ, ಎಲ್ಲಾ ತತ್ವಜ್ಞಾನಿಗಳು ಇಲ್ಲಿಯವರೆಗೆ ಗೌರವದಿಂದ ಮಾತನಾಡಿರುವ ಪ್ರಸಿದ್ಧ 'ಸತ್ಯ', ಈ ಸತ್ಯಶೋಧನೆಯ ಕಡೆಗಿನ ಇಚ್ಛೆ ನಮ್ಮ ಮುಂದೆ ಎಷ್ಟೆಲ್ಲಾ ಪ್ರಶ್ನೆಗಳನ್ನು ಹರಡಿದೆ! ಎಂತಹ ವಿಚಿತ್ರ, ಗೊಂದಲಮಯ, ಪ್ರಶ್ನಾರ್ಹ ಪ್ರಶ್ನೆಗಳು! ಇದು ಬಹಳ ವರ್ಷಗಳ ಕಥೆಯಾಗಿದೆಯಾದರೂ; ಇನ್ನೂ ಈಗಷ್ಟೇ ಪ್ರಾರಂಭವಾದಂತೆ ತೋರುತ್ತದೆ. ಕೊನೆಗೆ ನಾವು ಅಪನಂಬಿಕೆ ಬೆಳೆಸಿಕೊಂಡು, ತಾಳ್ಮೆ ಕಳೆದುಕೊಂಡು, ಅಸಹನೆಯಿಂದ ದೂರ ಸರಿದರೆ ಆಶ್ಚರ್ಯವಿದೆಯೇ? ಈ ಸ್ಫಿಂಕ್ಸ್ ನಮಗೆ ನಮ್ಮನ್ನು ನಾವೇ ಪ್ರಶ್ನೆಗಳನ್ನು ಕೇಳಲು ಕಲಿಸುತ್ತದೆಯೇ? ಇಲ್ಲಿ ನಿಜವಾಗಿಯೂ ನಮಗೆ ಪ್ರಶ್ನೆಗಳನ್ನು ಕೇಳುವವರು ಯಾರು? ನಮ್ಮಲ್ಲಿರುವ ಈ  "ಸತ್ಯದ ಇಚ್ಛೆ" ಎಂಬುದರ ನಿಜವಾದ ಅರ್ಥವೇನು? ವಾಸ್ತವವಾಗಿ ನಾವು ಈ ಇಚ್ಛೆಯ ಮೂಲದ ಬಗೆಗಿನ ಪ್ರಶ್ನೆಗೆ ದೀರ್ಘ ವಿಶ್ರಾಂತಿ ನೀಡಿದ್ದೇವೆ - ಇನ್ನೂ ಹೆಚ್ಚಿನ ಒಂದು ಮೂಲಭೂತ ಪ್ರಶ್ನೆಯ ಮುಂದೆ ಸಂಪೂರ್ಣ ಸ್ಥಗಿತಗೊಳ್ಳುವ ಸಲುವಾಗಿ. ನಾವೀಗ "ಸತ್ಯದ ಇಚ್ಛೆ"ಯ ಮೌಲ್ಯದ ಬಗ್ಗೆಯೇ ಪರಿಶೀಲಿಸುತ್ತಿದ್ದೇವೆ. ನಮಗೆ ಸತ್ಯ ಬೇಕು ಎಂದು ನಿಜವೇ ಆದಲ್ಲಿ: ಅಸತ್ಯ ಏಕೆ ಬೇಡ? ಮತ್ತು ಅನಿಶ್ಚಿತತೆ? ಮತ್ತು ನಿರ್ಲಕ್ಷ್ಯವೂ ಸಹ? ಸತ್ಯದ ಮೌಲ್ಯದ ಬಗೆಗಿನ ಸಮಸ್ಯೆ ನಮ್ಮ ಮುಂದಿದೆಯೇ - ಅಥವಾ ಸಮಸ್ಯೆಯ ಮುಂದೆ ನಮ್ಮನ್ನು ನಾವೇ ಪ್ರಸ್ತುತಪಡಿಸಿಕೊಂಡಿದ...